|| ಶ್ರೀ ರಂಗ ಸ್ತುತಿ ||
ರಾಗ : ಶ್ರೀ
ರಚನೆ : ಪುರಂದರದಾಸರು
ಬಂದನೇನೆ ರಂಗ ಬಂದನೇನೆ ।।ಪ।।
ತಂದೆ ಬಾಲಕೃಷ್ಣ ನವನೀತಚೋರ ।।ಅ.ಪ।।
ಘಲುಘಲುಘಲುರೆಂಬ ಪೊನ್ನಂದುಗೆ ಗೆಜ್ಜೆ
ಹೊಳೆಹೊಳೆಯುವ ಪಾದವನೂರುತ
ನಲಿನಲಿದಾಡುವ ಉಂಗುರ ಅರಳೆಲೆ
ಥಳಥಳಥಳ ಹೊಳೆಯುತ ಶ್ರೀಕೃಷ್ಣ ।।೧।।
ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ
ಝಣಝಣಝಣರೆಂಬ ನಡುವಿನ ಗಂಟೆ
ಢಣಧಢಣಢಣರೆಂಬ ಪಾದದ ತೊಡವಿನ
ಮಿಣಿಮಿಣಿ ಮಿಣಿ ಕುಣಿದಾಡುತ ಶ್ರೀಕೃಷ್ಣ ।।೨।।
ಹಿಡಿಹಿಡಿ ಹಿಡಿರೆಂದು ಪುರಂದರವಿಠಲನ
ದುಡುದುಡುದುಡುರನೇ ಓಡುಲು
ನಡಿನಡಿನಡಿಯೆಂದು ಮೆಲ್ಲನೆ ಪಿಡಿಯಲು
ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ ।।೩।।
0 ಕಾಮೆಂಟ್‌ಗಳು