ನಾರಾಯಣ ಎನ್ನಿರೋ - Narayana Enniro

|| ನಾರಾಯಣ ಸ್ತುತಿ ||




ನಾರಾಯಣ ಎನ್ನಿರೋ

ಶ್ರೀ ನರಹರಿ ಪಾರಾಯಣ ಪಾಡಿರೋ ||ಪ||


ನಾರಾಯಣನೆಂದು ಅಜಮಿಳನು ಕೈವಲ್ಯ 

ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರೋ||ಅ.ಪ|| 


ಕಾಶಿಗೆ ಪೋಗಲೇಕೆ ಕಾವಡಿ ಪೊತ್ತು ಬೇಸತ್ತು ತಿರುಗಲೇಕೆ 

ವಾಸುದೇವನ ನಾಮ ಬಾಯ್ತುಂಬ ನೆನೆದರೆ, 

ಕ್ಲೇಶಗಲೆಂಬೊದು ಲೇಶ ಮಾತ್ರವಿಲ್ಲ ॥ ೧॥ 


ಚೋರರ ಭಯವಿಲ್ಲವೊ 

ಹರಿ ನಾಮಕೆ ಯಾರ ಅಂಜಿಕೆ ಇಲ್ಲವೊ 

ಊರನಾಳುವ ದೊರೆಗೆ ನೀತಿ ಭೀತಿಗಳಿಲ್ಲ 

ಘೋರ ಪಾತಕವೆಲ್ಲ ದೂರ ಮಾಡುವುದಕ್ಕೆ ||೨|| 


ಸ್ನಾನವ ಮಾಡಲೇಕೆ ಮಾನವರಿಗೆ ಮೌನ ಮಂತ್ರಗಳೇತಕೆ 

ದೀನ ಪಾಲಕ ನಮ್ಮ ಬೆಟ್ಟದ ಒಡೆಯನ್ನ 

ಧ್ಯಾನಕ್ಕೆ ಸರಿಯುಂಟೆ ಪುರಂದರ ವಿಠ್ಠಲ ||೩|| 


ನಾರಾಯಣ ಶ್ರೀಮನ್ನಾರಾಯಣ 

ಸತ್ಯನಾರಾಯಣ ಲಕ್ಷ್ಮೀನಾರಾಯಣ ಎನ್ನಿರೋ

ಶ್ರೀ ನರಹರಿ ಪಾರಾಯಣ ಮಾಡಿರೋ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು