|| ಹನುಮ ಸ್ತುತಿ ||
ಜಯ ಹನುಮಂತ ಜಯ ಗುಣವಂತ
ಜಯ ಜಯ ಮರುತಾತ್ಮಜ ಬಲವಂತ ||ಪ||
ಶರಧಿ ಲಂಘಿಸುತ ಜನನಿಯ ಕಂಡ
ಮರಳಿ ಚೂಡಾಮಣಿಯನು ತಾ ತಂದ
ಕರದೊಳಿತ್ತು ರಾಮಗೆ ಶರಣೆಂದ
ಗಿರಿಧರ ನೀ ಅಂಜನಿಯ ಕಂದ
ದಾಸ ಶ್ರೇಷ್ಠ ಗುರು ದಾಸ ಬಂಧು ಹರಿ
ದಾಸ ಪೋಷ ಶ್ರೀ ಪ್ರಾಣ
ಈಶ ಕುಲಾಗ್ರಣಿ ಪೂಜಿಪೆ ನಿನ್ನ
ಶ್ರೀಶ ಮೂಲ ನಾರಾಯಣ ||೧||
0 ಕಾಮೆಂಟ್‌ಗಳು