|| ಬೆಲಗೂರು ಹನುಮ ಭಜನೆ ||
ಎಲ್ಲಿ ಹುಡುಕಲೋ ನಮ್ಮಚೆಲುವ ಹನುಮನಾ
ನಮ್ಮ ಮುದ್ದು ಹನುಮನಾ ನಾಎಲ್ಲಿ ಹುಡುಕಲೋ।
ಅತ್ತಇತ್ತ ಹಾರಿ ಹಾರಿ ಇತ್ತ ಬಂದಾನಾ
ನಮ್ಮತ ಬಂದಾನಾ ನಮ್ಮಮುದ್ದುಹನುಮನಾ||ಪ||
ಲಂಕೆಯಲ್ಲಿಸೀತೆ ಇರವ ಕೇಳಿ ತಿಳಿದಾನಾ
ಜಾಂಬವಂತನಿಂದ ತನ್ಮತನವನರಿತಾನಾ |
ಸೂರ್ಯಜಂದ್ರರನ್ಶೇ ಮೀರಿ ಹಾಗೆ ನಿಂತಾನಾ
ಸಾಗರನ್ನೇ ಗೋಷ್ಟದಾಗಿ ಮಾಡಿಬಿಟ್ಟಾನಾ॥3॥
ನಡುವಲೆದ್ದಮೈನಾಕನ ಮೆಟ್ಟಿ ನಡೆದಾನಾ
ಸುರಸೆಯನು ಜಾಳಿನಲ್ಲೀ ಎಳೆದು ಹರಿದಾನಾ |
ನೆರಳು ಮಾರಿಯನ್ಮುಸಾರಿ ಹರಿದುಬಿಸುಟಾನಾ
ಲಂಕೆಯನ್ಮುಲೀಲೆಯಿಂದ ಸೇರಿ ನಿಂತಾನಾ॥ 2॥
ಅಣವಿಗಿಂತ ಅಣುವೇ ಆಗಿ ತೋರಿಕೊಂಡಾನಾ
ತಿಂಗಳಲ್ಲಿರಾತ್ರಿಯಲ್ಲಿಲಂಕೆ ಸೇರ್ದಾನಾ |
ಲಂಕಿಣಿಯನು ಲೆಕ್ಬಿಸುವವನೇ ನಮ್ಮ ಹನುಮನು
ಪುರವಸೇರಿ ಸೀತೆ ಇರುವ ತಿಳಿಯ ಹೊರಟಾನಾ |3|
ಸುತ್ತಲಳೆದು ತಾಯಿ ಕಾಣದಿರಲು ನಂದಾನಾ
ಶೋಕ ನೀಗಲಶೋಕವನಕೆ ಬಂದು ನಿಂತಾನಾ।
ರಾಕ್ಷಸಿಯರೆಲ್ಲಾಸುತ್ತನಡುವೆ ತಾಯಿ ಸೀತೆ ಇತ್ತ
ಮನದಿ ಹರುಷ ಉಕ್ಕಿರಾಮರಾಮ ಅಂದಾನಾ
( ಶ್ರೀರಾಮ ಅಂದಾನಾ ಸೀತಾರಾಮ ಅಂದಾನಾ)॥ 4॥
ರಾಮಶರಿತೆ ಪಾಡಿ ಸೀತೆ ಮನವ ಗೆದ್ದಾನಾ
ಬಳಿಗೆ ಬಂದು ಅಂಗುಲೀಯಕವನು ಇತ್ತಾನಾ।
ರಾಮನಿರವನರುಹಿ ಮತ್ತೆ ಸೀತೆ ಶೋಕ ಇಳಿಸಿ ಬೇಗ
ತಾಯಿಯಿತ್ತನೆನಪಿನೊಡನೆ ಮರಳಿ ಹೊರಟಾನಾ॥5॥
ತಾನು ಬರುವ ಮಾರ್ಗ ಮನದೊಳೆಟ್ಟು ನಡೆದಾನಾ
ವನವನಳಿಸಿ ದೈತ್ಯಾಗರವ ಮುರಿದು ವಿಂದಾನಾ।
ಕೋಟಿ ರಾಕ್ಷಸರನು ಕೊಂದು ಶಕ್ತಿಮೆರೆದು ಅಕ್ಷನಾಶ
ಮಾಡಿ ರಾವಣನ್ಶೇ ನಿಜದಿ ಕೆಣಕಿದಾತನಾ।|6॥
ಎದುರು ಬಂದ ದುಷ್ಟರನ್ನುಬಿಡದೆ ಸದೆದಾನಾ
ಶೂರನ ಪ್ರಹಸ್ತರನ್ಮು ಹಿಡಿದು ತರೆದಾನಾ।
ಇಂದ್ರಜಿತುವಿನೆಲ್ಲಾಶಕ್ತಿಇಳಿಸಿ ಮೆರೆದಾನಾ
ಬ್ರಹ್ಮದೇವನಸ್ವವೆಂದು ನಮಿಸಿ ನಿಂದಾನಾ।|7॥
ಓಲಗದಲಿ ಬೀತಿ ಇಲ್ಲದೆ ರಾಮ ಮಹಿಮೆಯಾ
ಪಾಡಿ ತಾನು ರಾಮದೂತನೆಂದು ನುಡಿದಾನಾ|
ತನಗೂ ಶೆಕ್ಟೆಯಾಗಾಲಿನಿತು ಜಿಂತೆಯಿಲದಾನಾ
ಅಗ್ನಿಸ್ಪರ್ಶ ಬಾಲಕ್ಕಾಗೇ ಹಾರಿಬಿಟ್ನಾನಾ ||8||
ದುಷ್ಟ ಗೃಹಗಳೆಲ್ಲದಕ್ಕೂಬೆಂಕಿ ಇಟ್ಟಾನಾ
ಭಕ್ತ ವಿಭೀಷಣನ ಮನೆಯ ಮಾತ್ರ ಬಿಟ್ಟಾನಾ
ಮತ್ತೆತಾಯ ಕಂಡು ಉದದಿ ಹಾರಿ ಬಂದಾನಾ
ಸೀತೆಯಿತ್ತ ಒಡವೆ ರಾಮನಿಗಿತ್ತುನಲಿದಾನಾ||9॥
ಭೀಮಗದೆಯ ಬೀಸಿ ಶತ್ರುನಾಶ ಮಾಡ್ದಾನಾ
ಕೊಟ್ಟಿ ಭಕ್ಷಭೋಜ್ಯ ತಿಂದು ತೇಗಿದಾತಾನಾ।
ತರುವಿನಿಂದ ತರುವಿಗಿಳಿದು ನಲಿದು ಭಕ್ತಕೋಟಿಗೊಲಿದು
ಗ್ರಾಮದಿ ಬೆಲಗೂರಿನಲ್ಲಿಸುಖದಿ ನಿಂದಾನಾ||10||
ಎಲ್ಲಿಹುಡುಕಲೋ ನಮ್ಮ ವೀರ ಹನುಮನಾ
ನಮ್ಮಧೀರ ಹನುಮನಾ ನಾ ಎಲ್ಲಿಹುಡುಕಾಲೋ |
ಸುತ್ತಮುತ್ತಹಾರಿಹಾರಿ ಇತ್ತ ಬಂದಾನಾ
ನಮ್ಮತ್ತ ಬಂದಾನಾ ನಮ್ಮಮುದ್ದುಹನುಮನಾ
ನಮ್ಮಬಿಂದುಮಾಧವನಾ ||11||
0 ಕಾಮೆಂಟ್‌ಗಳು