|| ಮಹಾಲಕ್ಷ್ಮಿ ಸ್ತುತಿ ||
ರಾಗ: ರಂಜಿನಿ
ತಾಳ: ಆದಿ
ರಚನೆ : ಶ್ರೀ ಪುರಂದರ ದಾಸರು
ಪಾಲಿಸೆನ್ನ ಶ್ರೀ ಮಹಾಲಕ್ಷ್ಮಿ|
ಪಾಲಿಸೆ ಎನ್ನನು ಪಾಲಾಬ್ದಿ ಸಂಜಾತೆ ||ಪ||
ಲಲಿತಾಂಗಿ ಶುಭೇ ದೇವಿ ಮಂಗಳಲೇ ದೇವಿ||ಅ.ಪ||
ವೇದಾಭಿಮಾನಿ ಸಾರಸಾಕ್ಷಿ |
ಶ್ರೀಧರ ರಾಮನಣೀ ||
ಕಾದುಕೋ ನಿನ್ನಯಾ ಪಾದ ಸೇವಕರನ್ನ |
ಆದಿ ಶಕ್ತಿ ಸರ್ವಾಧರೇ ಗುಣ ಪೂರ್ಣೆ||1||
ದಯದಿಂದ ನೋಡೆ ಭಜಿಪ ಭಕ್ತರ |
ಭಯ ದೂರ ಮಾಡದೆ ||
ದಯಾ ಪಾಲಿಸೆ ಮಾತೇ ತ್ರೈಲೋಕ್ಯ ವಿಖ್ಯಾತೇ|
ಜಯ ದೇವೀ ಸುವ್ರತೇ ಜಗದೀಶನ ಪ್ರೀತೇ ||2||
ನೀನಲ್ಲದೆ ಅನ್ಯ ರಕ್ಷಿಪರನು ಕಾಣೆ |
ನಾ ಮುನ್ನ ||
ದಾನವಾಂತಕ ಸಿರಿಪುರಂದರ ವಿಠ್ಠಲನ್ನ |
ಧ್ಯಾನಿಪ ಭಕುತರ ಮನ ನಿನ್ನದು ತಾಯೇ ||3||
0 ಕಾಮೆಂಟ್‌ಗಳು