Iduve Pandarapura Vithala - ಇದುವೇ ಪಂಡರಾಪುರ ವಿಠಲ

|| ಪಾಂಡುರಂಗ ಭಜನೆ ||



ಇದುವೇ ಪಂಡರಾಪುರ ವಿಠಲ

ಇದ ನಾ ಅರಿಯದೆ ಪೋದೆ ಮುಕ್ತಿಯ ಧಾಮ||ಪ||


ಪಾಪ ತೊಳೆವ ಪಾವನ ಚಂದ್ರಭಾಗ 

ತಾಪವ ಹರಿಸಿ ಶಾಂತಿಯನೀವ 

ಈ ವರ ಕ್ಷೇತ್ರ ಭೂವೈಕುಂಠ

ಭವ ಭಯ ಪರಿಹಾರ ವಿಠಲ ||೧||


ಪುಣ್ಯದ ದಿವಸವು ಏಕಾದಶಿ ಯಂದು

ಹಾಡುತ ನಲಿಯುತ ಭಕುತರು ಬಂದು

ನೋಡುವ ಭಾಗ್ಯ ಎನಗೆ ಇಂದು 

ಕರುಣಿಸಿ ಮುದಗೈದೆ ವಿಠಲ || ೨||


ಶಾಂತಲ ಜಾಣೆಯು ಚೋಕಮೇಲನು 

ಶ್ರೀ ತುಕಾರಾಮನು ಜ್ಞಾನೇಶ್ವರನು

ಪುಂಡಲೀಕನು ನಾಮದೇವನು 

ಮೋಕ್ಷವನೇ ಪಡೆದ ವಿಠಲ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು