|| ಶೇಷ ದೇವರ ಸ್ತುತಿ ||
ಶೇಷದೇವನೆ ಪೋಷಿಸೆನ್ನನು ॥ಪ॥
ಶೇಷದೇವಾ ಕರುಣಾ ಸಮುದ್ರ ಭವ-
ಕ್ಲೇಶ ಕಳೆಯೋ ಸುರೇಶ ಮುಖವಿನುತ ॥ಅ.ಪ॥
ವಾಸುದೇವನ ಶಯ್ಯಾಸನ ರೂಪದಿ ಸೇವಿಸುವಿ ಚರಣ
ಸಾಸಿರವದನದಿ ಶ್ರೀಶನ ಶುಭಗುಣ
ಲೇಶ ವರ್ಣಿಸುವ ಭಾಸುರ ವಪುಷಾ ॥೧॥
ಹೇ ಮಹಾತ್ಮನೇ ಭೂಮಿ ಪಾತಾಳವ್ಯೋಮ ವ್ಯಾಪ್ತನೆ
ರಾಮನ ಸೇವಿಸಿ ಪ್ರೇಮವ ಪಡೆದಿಹ
ಸೌಮಿತ್ರಿಯ ಶುಭನಾಮದಿ ಮೆರೆದಾ ॥೨॥
ವಾರುಣೀವರ ಧಾರುಣಿಯೊಳು
ಕೃಷ್ಣಾತೀರ ಕಾರ್ಪರ ನಾರಸಿಂಹನ ಪ-
ದಾರವಿಂದಯುಗ ಸೇರಿ ಸುಖಿಸುತಿಹ ಶೌರಿಯ ಅಗ್ರಜ ॥೩॥
0 ಕಾಮೆಂಟ್ಗಳು