|| ಶಿವ ಸ್ತುತಿ ||
ವಂದೇ ಶಂಭುಂ,ಉಮಾಪತಿಂ ಸುರಗುರುಂ
ವಂದೇ... ಜಗತ್ಕಾರಣಂ
ವಂದೇ ಪನ್ನಗ ಭೂಷಣಂ ಮ್ರಘಧರಂ
ವಂದೇ ಪಶುನಾಂಪತಿಂ
ವಂದೇ ಸೂರ್ಯಶಶಾಂಕ ವನ್ಹಿನಯನಂ
ವಂದೇ ಮುಕುಂದ ಪ್ರಿಯಂ
ವಂದೇ ಭಕ್ತ ಜನಾಶ್ರಯಂಚ ವರದಂ
ವಂದೇ.... ಶಿವಂ ಶಂಕರಂ
ನ್ಯಾಯನೀತಿ ಮೂರ್ತಿವೆತ್ತ ಸತ್ಯದೈವವೆ
ಮಹಾಮಹಿಮ ಮಂಜುನಾಥ
ನಮೋ ಎನ್ನುವೆ
||ನ್ಯಾಯನೀತಿ||
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇರುವೆ ಆ ಸುರನದಿ
||ಭೂಮಿಗಿಳಿದ||
||ನ್ಯಾಯನೀತಿ||
ಧರ್ಮಪಾಲ, ದಯಾಶೀಲ ಮಂಜುನಾಥನೆ
ನಿನ್ನ ಚರಣಸೇವೆ ನಮ್ಮ ಗುರಿಯ ಸಾಧನೆ
||ಧರ್ಮಪಾಲ||
ಕಾಳರಾತ್ರಿ, ಕಾಳರಾಹು, ಕುಮಾರಸ್ವಾಮಿಯೆ
ನೇಮದಿಂದ ನಮಿಸುವೆವು ಹೆಜ್ಜೆ ಹೆಜ್ಜೆಗೆ
||ನ್ಯಾಯನೀತಿ||
ಅಣ್ಣಪ್ಪ ಗುರುವೆ ನಿನಗೆ ಶರಣು ಎನ್ನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲ್ಲುವೆ
||ಅಣ್ಣಪ್ಪ||
ನ್ಯಾಯ ಮಾರ್ಗದಲ್ಲಿ ನಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು, ಸದಾ ಬೇಡುವೆ
||ನ್ಯಾಯನೀತಿ||
ಧರ್ಮವನ್ನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿನೀಡು
||ಧರ್ಮವನ್ನು||
ಸತ್ಯವೆಗೆಲ್ಲುವ ನ್ಯಾಯನೀಡು
ನಮ್ಮ ಮನದ ಗುಡಿಯಲ್ಲಿ ವಾಸಮಾಡು
||ನ್ಯಾಯನೀತಿ||
0 ಕಾಮೆಂಟ್‌ಗಳು