|| ಶ್ರೀರಾಮ ಸ್ತುತಿ ||
ರಾಮ ನಾಮ ಒಂದೆ ಸಾಕು ಬಾಳ ದಾರಿಗೆ
ಬೇರೆ ಭಾಗ್ಯ ಬೇಕೆ ರಾಮ ನಾಮ ಸಾಲದೆ
ರಾಮ ರಾಮ ರಾಮ ರಾಮ ರಾಮ ಎನ್ನುವಾ..
ಪ್ರೇಮದಿಂದ ಕರೆಯೆ ರಾಮ ಬಂದು ಸಲಹುವ
ಹುಟ್ಟು ಸಾವು ದಡಗಳೆರಡು ನಡುವೆ ಬಾಳುವೆ
ನಲಿವು ನೋವು ಹಲವು ಭಾವ ಹರಿವ ಕಾಲುವೆ
ಹರಿದು ಹರಿದು ದಣಿದ ಜೀವ ನೀನು ಮಾನವ
ಒಮ್ಮೆ ನೀನು ಭಜಿಸಿ ನೋಡು ರಾಮ ನಾಮವ||1||
ಇಂದು ನಿನ್ನದೆಂಬುದೆಲ್ಲ ನಾಳೆ ಯಾರದೋ
ಇಂದು ಕಳೆಯೆ ನಾಳೆ ಎಂದು ಬಹುದೊ ಬಾರದೋ
ಬದುಕಿನೆರಡು ಕ್ಷಣವು ನಿನ್ನ ಬಾಳು ಮಾನವಾ
ಎಲ್ಲ ಮರೆತು ನೆನೆಯೋ ಇರುತ ರಾಮ ನಾಮವಾ||2||
0 ಕಾಮೆಂಟ್‌ಗಳು