ಅಯೋಧ್ಯಾ ನಗರದಿಂದ - Ayodhya Nagaradinda

|| ಶ್ರೀರಾಮ ಸ್ತುತಿ ||

ರಚನೆ ~ ವಿಜಯಲಕ್ಷ್ಮಿ ಮಳಿಯೆ ರವರು





ಅಯೋಧ್ಯಾ ನಗರದಿಂದ 

ಶ್ರೀರಾಮಚಂದ್ರ ಅಶ್ವತ್ಥಪುರಕೆ ಬಂದ ||ಪ||


ನಮ್ಮ ದೇಶಸ್ಥ ಸಮಾಜದ ಕೆಲವು ಹಿರಿಯರು|

ಗೋಂದಾವಲಿ ಮಹಾರಾಜರ ಬೇಡಿಕೊಂಡರು||

ಶ್ರೀರಾಮನ ಮಂದಿರವನು ಸ್ಥಾಪಿಸಿ ಎಂದರು|

ಮಹಾರಾಜರಾಣತಿಯಂತೆ ಕರೆತರಲು ಬ್ರಹ್ಮಾನಂದರು ||೧||


ಶ್ರೀರಾಮನಿಗಿಲ್ಲಿ ಭವ್ಯ ಮಂದಿರವಿರುವುದು|

ಸಾಕೇತದರಮನೆಯಾ ಹೋಲುತಲಿಹುದು||

ಸೀತಾ ಲಕ್ಷ್ಮಣ ಹನುಮರೆಲ್ಲರು ರಾಮನ ಜೊತೆಗೂಡಿರಲು|

ಅಶ್ವತ್ಥಪುರವು ಭೂ ವೈಕುಂಠವಾಗಿ ತೋರುತಿರಲು ||೨||


ಚೈತ್ರಶುದ್ಧ ಪಾಡ್ಯದಿ ಹನುಮ ಧ್ವಜ ಸ್ತಂಭವೇರಿ|

ರಾಮಭಕ್ತರೆಲ್ಲರಿಗೂ ಮಾರ್ಗವ ತೋರಿ||

ಎನ್ನ ಪ್ರಭು ಶ್ರೀರಾಮನುತ್ಸವವು ನಡೆದಿಹುದು|

ನೀವೂ ಬನ್ನಿ ರಾಮಕೃಪೆಗೆ ಪಾತ್ರರಾಗಿ ಎಂದಂತಿಹುದು||೩||


ರಾಮರಾಯ ತನ್ನ ಪರಿವಾರದೊಂದಿಗೆ|

ದಿನಕೊಂದು ವಾಹನವೇರಲು ಬರುವುದು ಮೆರವಣಿಗೆ||

ನವಮಿಯಂದು ಪುನಃ ರಾಮ ನವ ಶಿಶುವಾಗಿ|

ನಮ್ಮೆಲ್ಲರ ತಾ ಮಾಡುವ ಕೌಸಲ್ಯೆಯರಾಗಿ ||೪||


ದಶಮಿಯ ದಿನ ರಥೋತ್ಸವದ ವೈಭವ ನೋಡಲು|

ಮುಕ್ಕೋಟಿ ದೇವತೆಗಳು ಈ ಧರೆಗಿಳಿಯಲು||

ಸರಯೂ ನದಿ ತಾನು ಭಕ್ತಿಸುಧೆಯಾಗಿ ಹರಿಯಲು |

ಪಟ್ಟಾಭಿರಾಮನಾಗಿ ನಿಲುವ ಭಕ್ತಜನರ ಹರಸಲು ||೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು