|| ಗೋವಿಂದ ಸ್ತುತಿ ||
ಧ್ಯಾನವ ಮಾಡಿರಿ ದೀನ ವತ್ಸಲನ
ಧೀನ ವತ್ಸಲಾ ನಮ್ಮ ಒಡೆಯ ವಿಠಲನ ||
ತಂದೆ ತಾಯಿಯು ಬಂಧು ಬಳಗವು ಇವನ್ನೆಲ್ಲ
ವಂದಿಸುತಲಿ ಇವಗೆ ನಾವೆಲ್ಲರೂ
ಕಮಲಾಕ್ಷನಾಣೆ ಕಲ್ಯಾಣ ಸಕಲರಿಗೂ
ನಮಿಸಿ ಬೇಡುತಲಿ ಕೊಂಡಾಡಿಹಾಡುವೆ ||
ಸಂಕಟಹಾರಿ ಗದಾಧರ ದೇವನ
ಶಂಕು ಚಕ್ರಧರ ಗೋವಿಂದನ
ಓಂಕಾರ ರೂಪ ಪ್ರತಾಪನ ||
ಶೃಂಗಾರದಿ ಎನ್ನ ಹೃದಯ ಮಂದಿರದಲ್ಲಿ
ಕಂಗೊಳಿಸುತ ನಿತ್ಯ ನೆಲೆಸಿನ
ಮಂಗಳ ಮಹಿಮಾ ಮಾಧವ ಜನಾರ್ಧನ
ರಂಗವಿಠಲ ಮಂಗಳಶ ಮಹೇಶ ||

0 ಕಾಮೆಂಟ್‌ಗಳು