|| ತತ್ವ ಪದ ||
ಯಾರಿಗೆ ಯಾರುಂಟು ಎರವಿನ ಸಂಸಾರ||2||
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ||2||
||ಯಾರಿಗೆ ||
ಬಾಯಾರಿತು ಎಂದು ಬಾವಿ ನೀರಿಗೆ ಪೋದೆ||2||
ಬಾವಿಲಿ ಜಲ ಬತ್ತಿ ಬರಿದಾಯಿತು ಹರಿಯೆ
||ಬಾಯಾರಿತು||
ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ||2||
ಮರ ಬಗ್ಗಿ ಶಿರದ ಮೇಲೊರಗಿತು ಹರಿಯೆ
||ಯಾರಿಗೆ||
ಅಡವಿಯೊಲು ಮನೆ ಮಾಡಿ
ಗಿಡಕೆ ತೊಟ್ಟಿಲು ಕಟ್ಟೆ||ಅಡವಿ||
ತೊಟ್ಟಿಲಿನ ಶಿಸು ಮಾಯ ಆಯಿತು ಹರಿಯೆ
ತಂದೆ ಶ್ರೀ ಪುರಂದರ ವಿಠ್ಠಲ ನಾರಾಯಣಾ||2||
ನಾ ಸಾಯೊ ಹೊತ್ತಿಗೆ ನಿ ಕಾಯೋ ಹರಿಯೆ
||ಯಾರಿಗೆ||

0 ಕಾಮೆಂಟ್‌ಗಳು