ಧೀರ ಗಂಭೀರಳೆ ದೀನರ ಪೊರೆವಳೆ - Dheera Gambheerale Deenara Porevale

||ನವರಾತ್ರಿ ದೇವಿ ಹಾಡು||




ಧೀರ ಗಂಭೀರಳೆ ದೀನರ ಪೊರೆವಳೆ

ಹರಿಣಿ ದೇವಿಯೇ ನಮೋ ನಮೋ

ಗಾಯತ್ರಿ ದೇವಿಯೇ ಗಾನ ವಿಲೋಚಳೆ

ಶಾರದಾ ಮಾತೆಯೇ ನಮೋ ನಮೋ


ಅಖಿಲಾಂಡೇಶ್ವರಿ ಆದಿಪರಾಶಕ್ತಿ

ಅನ್ನಪೂರ್ಣೇಶ್ವರಿ ನಮೋ ನಮೋ

ಸರ್ವೇಶ್ವರಿಯೇ ಸರ್ವಾರ್ಥ ಸಾಧಕ

ಸರ್ವಮಂಗಳೆಯೇ ನಮೋ ನಮೋ


ಅರ್ಧನಾರೀಶ್ವರಿ ಅಭಯ ಪ್ರದಾಯಿನಿ

ಅಂಬಾಭವಾನಿಯೇ ನಮೋ ನಮೋ

ನಿತ್ಯಾನಂದಳೆ ನಿಗಮಾತೀತಳೆ

ಸರ್ವಮಂಗಳೆಯೇ ನಮೋ ನಮೋ


ರಜತ ಗಿರೀಶ್ವರಿ ರಾಜೀವ ಲೋಚನೆ

ರಾಜರಾಜೇಶ್ವರಿ ನಮೋ ನಮೋ

ಪ್ರಸನ್ನ ರೂಪಳೇ ಪ್ರಭಾವ ಶಾಲಿನಿ

ಪಾಪ ವಿನಾಶಿನಿ ನಮೋ ನಮೋ


ಭವಭಯಹಾರಿಣೀ ಅಸುರ ಸಂಹಾರಿಣೀ

ದುರ್ಗಾಮಾತೆಯೇ ನಮೋ ನಮೋ

ಖಡ್ಗಧಾರಿಣಿ ತ್ರಿಶೂಲಪಾಣಿ

ಚಾಮುಂಡೇಶ್ವರಿ ನಮೋ ನಮೋ


ದುಷ್ಟರ ಶಿಕ್ಷಕಿ ಶಿಷ್ಟರ ರಕ್ಷಕಿ

ಸಂತೋಷಿ ಮಾತೆಯೇ ನಮೋ ನಮೋ

ಕಾನನ ವಾಸಳೆ ಅಡವಿಯ ಪೊರೆವಳೆ

ಬನಶಂಕರಿಯೇ ನಮೋ ನಮೋ


ರೋಗನಿವಾರಿಣಿತಾಪನಿವಾರಿಣಿ

ಭೂದೇವಿ ಮಾತೆಯೇ ನಮೋನಮೋ

ಕನಕ ಪ್ರಿಯಳೇ ವೈಷ್ಣವಿ ಭಾರ್ಗವಿ

ಕುಂಕುಮಾಂಕಿತೆಯೇ ನಮೋ ನಮೋ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು